ಪಾಪಿಯ ಪಾಡು – ೨

ಪಾಪಿಯ ಪಾಡು – ೨

ಪಾದ್ರಿಗೆ ತನ್ನಲ್ಲಿ ಉಂಟಾದ ನಂಬಿಕೆಯಿಂದ ಮನಸ್ಸು ಕರಗಿ ಜೀನ್ ವಾಲ್ಜೀನನು ಅಲ್ಲಿಂದ ಮುಂದೆ ಒಳ್ಳೆಯ ನಡತೆಯಿಂದಿರು ವುದೇ ಉತ್ತಮವೆಂದು ಅನುಭವದಿಂದ ತಿಳಿದುಕೊಂಡು, ತನ್ನ ಜನ್ಮಾವಧಿಯ ಒಳ್ಳೆಯ ನಡತೆಯನ್ನೇ ತನ್ನ ಧೈಯವಾಗಿಟ್ಟು ಕೊಂಡನು, ಒಂದು ಸಣ್ಣ ಪಟ್ಟಣದಲ್ಲಿ ಉದ್ಯೋಗವನ್ನು ಸಂಪಾ ದಿಸಿಕೊಂಡು ಎಂಟು ವರ್ಷಗಳಲ್ಲಿ ಒಳ್ಳೆಯ ಐಶ್ವರ್ಯವಂತ ನಾಗಿ, ಕಡೆಗೆ ಒಂದು ಕೈಗಾರಿಕೆಯ ಕಾರ್ಖಾನೆಗೆ ಅಧಿಪತಿಯೂ, ಗ್ರಾಮದ ಮುಖ್ಯಾಧಿಕಾರಿಯು ಆದನು. ಸಹಾಯಾಪೇಕ್ಷಿ ಗಳಾದ ಪ್ರತಿಯೊಬ್ಬರಿಗೂ ಸಹಾಯಮಾಡುವ ಉದಾರಮನಸ್ಸು ಇವನಿಗೆ ಹುಟ್ಟಿತು. ಈವರೆಗೆ ಅವನಿಗೆ ಐವತ್ತು ವರ್ಷ ವಯಸ್ಸಾ ಗಿತ್ತು; ಹೆಸರನ್ನು ಮಾನ್ ಸಿಯುರ್ ಮೆಡಲಿನ್ ಎಂದು ಬದ ಲಾಯಿಸಿಕೊಂಡಿದ್ದನು. ಊರಿನವರೆಲ್ಲರೂ ಇವನನ್ನು ಧರ್ಮ ನಿಷ್ಠನೆಂದೂ ತಮ್ಮ ಅತ್ಯಾಪ್ತ ಸ್ನೇಹಿತನೆಂದೂ ತಿಳಿದಿದ್ದರು. ಒಬ್ಬಾತನಿಗೆ ಮಾತ್ರ ಇವನ ವಿಷಯದಲ್ಲಿ ಸಂದೇಹವೇ ಇತ್ತು.

ಮಾನ್ಸಿಯರ್ ಮೇಡಲಿನನು ಎಲ್ಲರನ್ನೂ ಒಹು ಶಾಂತತೆ ಯಿಂದಲೂ ಪ್ರೀತಿಯಿಂದಲೂ ಕಾಣುತ್ತಿದ್ದನು. ರಾಜವೀಧಿ ಯಲ್ಲಿ ಹೋಗುತ್ತಿರುವಾಗ, ಜನರನೇಕರು ಈತನನ್ನು ದೇವರು ಯಾವಾಗಲೂ ಸುಖವಾಗಿಟ್ಟಿರಲೆಂದು ಅನೇಕ ವೇಳೆ ಕೃತಜ್ಞತೆ ಯಿಂದ ಹರಸುತ್ತಿದ್ದರು. ಈತನು ಬೀದಿಯಲ್ಲಿ ಹೊರಟಾಗ ಅನೇಕಾವೃತ್ತಿ, ಚಪ್ಪಟೆಯ ಟೋಪಿಯನ್ನೂ ಬೂದುಬಣ್ಣದ ಅಂಗಿ ಯನ್ನೂ ಧರಿಸಿ, ಕೈಯಲ್ಲಿ ಬಲವಾದ ಬೆತ್ತವನ್ನು ಹಿಡಿದಿದ್ದ ಒಬ್ಬ ಎತ್ತರವಾದ ಮನುಷ್ಯನು ಹಠಾತ್ತಾಗಿ ಇವನಕಡೆಗೆ ತಿರುಗಿ, ಇವನು ಕಣ್ಮರೆಯಾಗುವವರೆಗೂ ಇವನನ್ನೇ ಗುರಿಯಿಟ್ಟು ನೋಡುತ್ತ, ತಲೆಯನ್ನು ಮೆಲ್ಲನೆ ಅಲ್ಲಾಡಿಸಿ, ತನ್ನ ಕೆಳ ತುಟಿ ಯನ್ನು ಮಗಿನವರೆಗೂ ಚಾಚಿ ವಿಚಿತ್ರವಾಗಿ ಅಣಕಿಸುತ್ತ, ಏನೋ ಸಾಧಿಸುತ್ತಿರುವವನಂತೆ ಚೇಷ್ಟೆಗಳನ್ನು ಮಾಡಿಕೊಂಡು ಹೋಗುತ್ತ, ‘ ಈ ಮನುಷ್ಯನು ಯಾರು ? ಇವನನ್ನು ನಾನು ಎಲ್ಲಿಯೋ ನಿಜವಾಗಿಯ ನೋಡಿಯೇ ಇದ್ದೇನೆ. ಎಲ್ಲರಂತೆ ನಾನಿವನಿಗೆ ಮೋಸಹೋಗತಕ್ಕವನಲ್ಲ,’ ಎಂದು ಮನಸ್ಸಿನಲ್ಲೇ ಅಂದುಕೊಂಡನು, ಈ ಮನುಷ್ಯನ ಹೆಸರು ಜೇ ವರ್ಮ್, ಇವನು ಗ್ರಾಮರಕ್ಷಕರಲ್ಲಿ ಒಬ್ಬನು (Police).

ಜೇವರ್ಟನು ಮಾನ್‌ ಸಿಯುರ್ ಮೆಡಲಿನನ ವಿಷಯದಲ್ಲಿ ಪರಿಪೂರ್ಣವಾದ ಸಂಶಯವುಳ್ಳವನಾಗಿ ವಿಧವಿಧವಾಗಿ ಊಹೆ ಮಾಡುತ್ತ ಅವನಮೇಲೆ ಕಣ್ಣಿಟ್ಟಿ ಇದ್ದನು. ಕಡೆಗೆ ಈ ವಿಷ ಯವು ಮೇಡಲಿನನ ಗಮನಕ್ಕೂ ಚೆನ್ನಾಗಿ ಬಿತ್ತು. ಆದರೂ ಇದರಿಂದ ಏನಾದೀತೆಂದು ಆತನು ಉದಾಸೀನಭಾವದಿಂದಿದ್ದನು. ಜೇವರ್ಟನನ್ನು ಈ ವಿಷಯವಾಗಿ ಆತನು ಯಾವ ಪ್ರಶ್ನೆಯನ್ನೂ ಮಾಡಲಿಲ್ಲ. ತನ್ನ ಬಳಿಗೆ ಕರೆಯಲೂ ಇಲ್ಲ. ಅವನು ಬಂದಾಗ ತಿರಸ್ಕರಿಸಲೂ ಇಲ್ಲ. ಅವನು ತನ್ನನ್ನು ದುರುಗುಟ್ಟಿಕೊಂಡು ಅವಮಾನಕರವಾಗಿಯೂ ತನಗೆ ಕೋಪ ಬರುವಂತೆಯೂ ನೋಡು ತಿದ್ದುದನ್ನು ಶಾಂತವಾಗಿ ಸಹಿಸಿಕೊಂಡು, ಅದನ್ನು ತಾನು ಗಮನಿಸದವನಂತೆಯೇ ತೋರ್ಪಡಿಸಿಕೊಂಡನು. ಇತರರನ್ನು ಕಂಡಂತೆಯೇ ಜೇವರ್ಟನನ್ನೂ ಸಹ ಶಾಂತಿ, ಪ್ರೀತಿ, ದಯೆ ಯಿಂದ ಕಾಣುತ್ತಿದ್ದನು.

‘ಮಾನ್ಸಿಯರ್ ಮೇಡನನಲ್ಲಿ ಸ್ವಾಭಾವಿಕವಾಗಿ ಕಂಡ ಶಾಂತಭಾವ ಮತ್ತು ಉತ್ತಮವಾದ ನಡೆವಳಿಕೆಗಳಿಂದ ಜೇವರ್ಟನ ಉದ್ದೇಶವು ನಿರರ್ಥಕವಾದಂತೆಯೇ ಕಂಡಿತು ಹೀಗಾದರೂ ಒಂದು ದಿನ ಜೇವರ್ಟನ ವಿಚಿತ್ರ ವರ್ತನವು ಮೇಡಲಿನನ ಮನಸ್ಸಿಗೆ ಚೆನ್ನಾ ಗಿಯೇ ತಟ್ಟಿದಂತೆ ಕಂಡಿತು. ಆ ಸಂದರ್ಭವೇನೆಂದರೆ :

ಒಂದು ದಿನ ಪ್ರಾತಃಕಾಲ ಮೇಡಲಿನನು ಆ ಊರಿನ ಒಂದು ಓಣಿಯಲ್ಲಿ ಹೋಗುತ್ತಿದ್ದನು. ಆಗ, ಅವನಿಗೆ ಯಾರೋ ಕೂಗಿಕೊಂಡಂತೆ ಧ್ವನಿಯು ಕೇಳಿಸಿತು. ಮುಂದೆ ಸ್ವಲ್ಪ ದೂರದಲ್ಲಿ ಜನರ ಗುಂಪು ಕಣ್ಣಿಗೆ ಬಿತ್ತು. ಇವನೂ ಅಲ್ಲಿಗೆ ಹೋದನು. ಫಾದರ್ ಫಾಚೆಲ್‌ವೆಂಟ್ ಎಂಬ ಒಬ್ಬ ಮುದು ಕನು ತನ್ನ ಗಾಡಿಯ ಕೆಳಗೆ ಸಿಕ್ಕಿಕೊಂಡಿದ್ದನು. ಅವನ ಕುದುರೆ ಯು ನೆಲಕ್ಕೆ ಬಿದ್ದು ಬಿಟ್ಟಿದ್ದಿತು. ತೊಡೆಗಳು ಮುರಿದು ಕುದುರೆ ಯು ಏಳಲಾರದೆ ಇತ್ತು. ಮುದುಕನು ಚಕ್ರಗಳ ನಡುವೆ ಸಿಕ್ಕಿಕೊಂಡಿದ್ದನು, ದುರ್ದೈವದೆಸೆಯಿಂದ ಭಾರವೆಲ್ಲವೂ ಆ ಮುದುಕನ ಮೇಲೆಯೇ ಬಿದ್ದಿತ್ತು. ಬಂಡಿಗೆ ಬಹಳ ಹೆಚ್ಚಾಗಿ ಸಾಮಾನು ತುಂಬಿತ್ತು. ಫಾದರ್ ಫಾಚೆಲ್ವೆಂಟನು ಆರ್ತ ಸ್ವರದಿಂದ ನರಳುತ್ತಿದ್ದನು. ಆತನನ್ನು ಹೊರಗೆ ಎಳೆದು ಕೊಳ್ಳಲು ಜನರು ಪ್ರಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ಸ್ವಲ್ಪ ಅಚಾತುರ್ಯದಿಂದ ಎಳೆದ ಆ ಮುದುಕನು ಜಜ್ಜಿ ಹೋಗುತ್ತಿದ್ದನು. ಒಟ್ಟು ಗಾಡಿಯನ್ನೆ ಕೆಳಗಿನಿಂದ ಏಕಕಾಲ ದಲ್ಲಿ ಮೇಲಕ್ಕೆ ಎತ್ತಿದಲ್ಲದೆ ಅವನನ್ನು ಹೊರಗೆ ತೆಗೆಯುವುದಕ್ಕೆ ಸಾಧ್ಯವೇ ಇರಲಿಲ್ಲ. ಈ ಅಪಾಯ ಸಮಯಕ್ಕೆ ಅಲ್ಲಿಗೆ ಬಂದ ಜೇವರ್ಟನು ಭಾಗವನ್ನೆ ತುವ ಜಾಕ್ ( jack ) ಯಂತ್ರವನ್ನು ತರಲು ಹೇಳಿಕಳುಹಿಸಿದ್ದನು.

ಮಾನ್‌ಸಿಯುರ್ ಮೇಡಲಿನ ಅಲ್ಲಿಗೆ ಬಂದನು. ಸೇರಿದ್ದ ಗುಂಪೆಲ್ಲವೂ ಆತನನ್ನು ಗೌರವಿಸಿ ಹಿಂದಕ್ಕೆ ಸರಿಯಿತು.

‘ ಸಹಾಯಮಾಡಿರಪ್ಪಾ ! ಈ ಮುದುಕನ ಪ್ರಾಣವನ್ನುಳಿ ಸುವ ಪುಣ್ಯವಂತರು ಯಾರೂ ಇಲ್ಲವೇನಪ್ಪಾ !’ ಎಂದು ಫಾಚೆಲ್ ವೆಂಟನು ಆರ್ತಸ್ವರದಿಂದ ಕೂಗಿಕೊಂಡನು.

ಮಾನ್‌ಸಿಯರ್ ಮೇಡನನು ಬಳಿಯಲ್ಲಿ ನಿಂತಿದ್ದವರ ಕಡೆಗೆ ತಿರುಗಿನೋಡಿ “ ಭಾರವನ್ನೆ ತುವ ಜಾಕ್ ಯಂತ್ರವು ಯಾರ ಲ್ಲಾದರೂ ಇದೆಯೇ ?’ ಎಂದನು.

ಒಬ್ಬ ರೈತ – ಅದನ್ನು ತರಲು ಹೋಗಿದ್ದಾರೆ. ಮೇಡಲಿನ್ -ಅದು ಎಷ್ಟು ಹೊತ್ತಿಗೆ ಬರಬಹುದು ? ರೈತ- ಪ್ಲಾಚೆಟ್ ಎಂಬ ಹತ್ತಿರವಾದ ಸ್ಥಳಕ್ಕೆ ಕಳುಹಿಸಿದ್ದೇವೆ. ಅಲ್ಲಿ ಒಬ್ಬ ಕಮ್ಮಾರನಿದ್ದಾನೆ. ಕಡೆಯ ಪಕ್ಷ ಕಾಲು ಗಂಟೆಯಾದರೂ ಬೇಕು.

ಮೇಡಲಿನ್ – ಕಾಲುಗಂಟೆಯೇ ?

ಹಿಂದಿನ ರಾತ್ರಿ ಮಳೆ ಬಿದ್ದಿತ್ತು. ನೆಲವೆಲ್ಲವೂ ನೆನೆದು ಚಕ್ರಗಳು ಪ್ರತಿಕ್ಷಣದಲ್ಲಿಯ ನೆಲದೊಳಕ್ಕೆ ಹೆಚ್ಚು ಹೆಚ್ಚಾಗಿ ಕುಸಿದು ಆ ಗಾಡಿಯು ಮುದುಕನ ಎದೆಯ ಮೇಲೆ ಪ್ರಬಲವಾಗಿ ಒತ್ತುತ್ತಿದ್ದಿತು. ಇನ್ನು ಐದು ನಿಮಿಷದೊಳಗಾಗಿ ಅವನ ಪಕ್ಕೆ ಲುಬುಗಳು ಮುರಿದು ಚೂರಾಗುವುದೇ ನಿಜವೆಂಬ ಸ್ಪಿತಿಯಲ್ಲಿತ್ತು.

ಮೇಡಲಿನ್ – ಕಾಲು ಗಂಟೆಯವರೆಗೂ ಕಾಯಲು ಸಾಧ್ಯವಿಲ್ಲ.

ರೈತರು -… ಕಾಯಲೇಬೇಕು. ಬೇರೆ ಮಾರ್ಗವಿಲ್ಲ.

ಮೇಡಲಿನ್-ಆವರೆಗೆ ಅನರ್ಥವೇ ಆಗುವುದು. ಗಾಡಿಯು ಕ್ಷಣಕ್ಷಣಕ್ಕೂ ಕುಸಿಯುತ್ತಿರುವುದು ಕಾಣುವುದಿಲ್ಲವೇ ?

ರೈತರು – – ಬೇರೆ ಉಪಾಯವೇ ಇಲ್ಲವಲ್ಲಾ !

ಮೇಡಲಿನ್ – ಕೇಳಿ, ಗಾಡಿಯ ಕೆಳಗೆ ಒಬ್ಬನು ನುಸಿದು ಹೋಗಿ ಅದನ್ನು ಬೆನ್ನಿನಮೇಲೆ ಎತ್ತುವುದಕ್ಕೆ ತಕ್ಕಷ್ಟು ಸ್ಥಳವಿದೆ ; ಹೀಗೆ ಮಾಡಿದರೆ ಅರ್ಧ ನಿಮಿಷದೊಳಗಾಗಿ ಆ ಬಡ ಮುದುಕನನ್ನು ಹೊರಗೆ ತರಲು ಸಾಧ್ಯವಾಗುವುದು. ಇಲ್ಲಿ ಅಷ್ಟು ಶಕ್ತಿಯ ಧೈರ್ಯವೂ ಉಳ್ಳವರು ಯಾರೂ ಇಲ್ಲವೆ? ಇದ್ದರೆ ಅಂಥವನಿಗೆ ಐದು ಲೂಯಿಡೋ (ಸುಮಾರು ಐವ ತೈದು ರೂಪಾಯಿ) ಗಳ ಬಹುಮಾನ ದೊರೆಯುವುದು. ಗುಂಪಿನಲ್ಲಿ ಯಾರೂ ಹೊರಗೆ ಬರಲಿಲ್ಲ.

ಮೇಡಲಿನ್ – ಹತ್ತು ಲೂಯಿಡೋರುಗಳು ಬಹುಮಾನ !

ನಿಂತಿದ್ದವರು ದೃಷ್ಟಿಯನ್ನು ತಗ್ಗಿಸಿದರು ; ಅವರಲ್ಲಿ ಒಬ್ಬನು, ‘ ಪಿಶಾಚದಂತಹ ಠೊಣೆಯನಾಗಿರಬೇಕು, ಹಾಗಿದ್ದರೆ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿಸಿಕೊಂಡು ಪ್ರಾಣಕಳೆದುಕೊಳ್ಳಲು ಅಂಥವನು ಹೋಗಬೇಕು,’ ಎಂದು ಗೊಣಗುಟ್ಟಿದನು. ಮೇಡಲಿನ್-ಯಾರಾದರೂ ಬನ್ನಿ, ಇಪ್ಪತ್ತು ಲೂಯಿಗಳು. ಹಿಂದಿನಂತೆಯೇ ಎಲ್ಲರೂ ನಿಶ್ಯಬ್ಬನಾಗಿಯೇ ಇದ್ದರು. ‘ ಯಾರೂ ಸುಮ್ಮನೆ ಮನಸ್ಸಿಲ್ಲದೆ ನಿಂತಿಲ್ಲ’ ಎಂಬ ಶಬ್ದವು ಕೇಳಿಸಿತು. ಮೇಡಲಿನನು ತಿರುಗಿನೋಡಲು ಜೇವರ್ಟನು ಕಣ್ಣಿಗೆ ಬಿದ್ದನು, ಈತನು ಬಂದಾಗ ಅವನಿದ್ದುದನ್ನೇ ಗಮನಿಸಿರಲಿಲ್ಲ.

ಜೇವರ್ಟನು, “ ಶಕ್ತಿಯೊಂದರಿಂದಲೇ ಅದು ಸಾಧ್ಯವಿಲ್ಲ. ಇಂತಹ ಗಾಡಿಯನ್ನು ಬೆನ್ನಿ ನಮೇಲೆ ಎತ್ತಬೇಕಾದರೆ ಅವನು ಅತಿ ಭಯಂಕರ ಸಾಹಸಿಯಾಗಿರಬೇಕು,’ ಎಂದನು.

ಅನಂತರ ವೆಡಲಿನನನ್ನು ಗುರಿಯಿಟ್ಟು ನೋಡುತ್ತ, ಪ್ರತಿಯೊಂದು ಶಬ್ದವನ್ನೂ ಒತ್ತಿ ಒತ್ತಿ, ‘ಮಾನ್ ಸಿಯುರ್ ಮೇಡ ಲಿನ್, ನೀವು ಅಪೇಕ್ಷಿಸುವ ಕೆಲಸವನ್ನು ಮಾಡಲು ಶಕ್ತನಾದ ಒಬ್ಬ ಪುರುಷನನ್ನು ಮಾತ್ರ ನಾನು ನೋಡಿರುವೆನು,’ ಎಂದನು. ಮೇಡಲಿನನಿಗೆ ಗಾಬರಿಯಾಯಿತು. ಜೇವರ್ಟ್– ಅವನೊಬ್ಬ ಅಪರಾಧಿಯು, ಮೆಡಲಿನ್.. -ಓಹೋ! ಹಾಗೆಯೇ ? ಜೇವರ್ಟ್-ಅಹುದು, ಟಲಾನ್ ನಗರದ ಗಾಲಿಯಲ್ಲಿ. ಇದನ್ನು ಕೇಳಿ ಮೇಡಲಿನನ ಮುಖವು ವಿವರ್ಣವಾಯಿತು. ಇಷ್ಟು ಹೊತ್ತಿಗೆ ಗಾಡಿಯು ಮೆಲ್ಲ ಮೆಲ್ಲನೆ ಇಳಿಯುತ್ತಲೇ ಇದ್ದಿತು. ಫಾದರ್ ಫಾಚೆಲ್‌ವೆಂಟನು ‘ ಅಯ್ಯೋ! ನಾನು ಸತ್ತೆ. ನನ್ನ ಪಕ್ಕೆಲುಬುಗಳು ಒಡೆಯುತ್ತಿವೆ. ಜಾಕ್ ಯಂತ್ರ ! ಅಯ್ಯೋ ! ” ಎಂದು ಅರಚಿದನು. ಮೆಡಲಿನನು ಸುತ್ತಲೂ ನೋಡಿ, ‘ ಹಾಗಾದರೆ ಇಲ್ಲಿ ಇಪ್ಪತ್ತು ಲೂಯಿಗಳ ಬಹುಮಾನವನ್ನು ಪಡೆದು ಈ ಬಡ ಮುದು ಕನ ಪ್ರಾಣವನ್ನು ಉಳಿಸಬಲ್ಲವರು ಯಾರೂ ಇಲ್ಲವಷ್ಟೆ !’ ಎಂದನು. ನಿಂತಿದ್ದವರಲ್ಲಿ ಒಬ್ಬರೂ ಅಲುಗಲಿಲ್ಲ. ಜೇವರ್ಟನು ಮಾತ್ರ, ‘ ನಾನು ಜಾಕ್ ಯಂತ್ರದಂತೆ ಕೆಲಸಮಾಡಬಲ್ಲ ಒಬ್ಬನನ್ನು ಮಾತ್ರ ಬಲ್ಲೆನು ; ಅವನು ನಾನು ಹೇಳಿದ ಅಪರಾಧಿಯು,’ ಎಂದು ಮತ್ತೆ ಪ್ರಾರಂಭಿಸಿದನು. ‘ ಅಯ್ಯೋ ! ಜಜ್ಜಿ ಹೋಗುತ್ತಿದ್ದೇನಲ್ಲಾ!’ ಎಂದು ಮುದು ಕನು ಕೂಗಿಕೊಂಡನು.

ಮೇಡಲಿನನು ತಲೆಯೆತ್ತಿ, ಹದ್ದಿನಂತೆ ಸೆಟ್ಟ ದೃಷ್ಟಿಯಿಂದ ತನ್ನನ್ನೇ ನೋಡುತ್ತಿದ್ದ ಜೇವರ್ಟನನ್ನೂ , ಅಲುಗದೆ ಸುತ್ತಲೂ ನಿಂತಿದ್ದ ರೈತರನ್ನೂ ನೋಡಿ ವ್ಯಸನದಿಂದ ಕಿರುನಗೆ ನಕ್ಕು, ಮರು ಮಾತನಾಡದೆ ಮೊಣಕಾಲೂರಿ, ಜನರು ಕೂಗಿಕೊಳ್ಳು ವುದಕ್ಕೆ ಮೊದಲೇ ಗಾಡಿಯ ಕೆಳಕ್ಕೆ ತೂರಿಹೋದನು. ಅಲ್ಲಿದ್ದವರೆಲ್ಲರೂ ಭಯ ಸಂದೇಹಗಳಿಂದ ಸ್ತಬ್ಬರಾದರು. ಮೇಡಲಿನನು ಆ ಭಯಂಕರವಾದ ಭಾರದ ಒ೦ಡಿಯ ಕೆಳಗೆ ಬೋರಲಾಗಿ ಮಲಗಿ, ಅದನ್ನೆ ತಲು ತನ್ನ ಮೊಣಕಾಲನ್ನೂ ಮೊಣಕೈಯನ್ನೂ ಒಟ್ಟುಗೂಡಿಸುವುದಕ್ಕಾಗಿ ಎರಡು ಸಲ ಪ್ರಯ ತ್ನಿಸಿದರೂ ಸಾಧ್ಯವಾಗಲಿಲ್ಲ, ಜನರು, ” ತಂದೇ ! ಮೆಡಲಿನ್ ! ಅಲ್ಲಿಂದ ಹೊರಗೆ ಬನ್ನಿ,’ ಎಂದು ಕೂಗಿಕೊಂಡರು. ಮುದಿ ಫಾಚೆಲ್ ವೆಂಟನ್ನು, ‘ಮಾನ್ ಸಿಯುರ’ ಮೆಡಲಿನ್ ! ನೀನು ಹೊರಟುಹೋಗು ; ನಾನು ಸಾಯಲೇಬೇಕು. ಇದು ಪ್ರತ್ಯಕ್ಷ ವಾಗಿದೆ. ನನ್ನ ಹಂಬಲನ್ನು ಬಿಡು ; ಇಲ್ಲವಾದರೆ ನೀನೂ ಜಜ್ಜಿ ಹೋಗುವೆ,’ ಎಂದನು, ಮೇಡಲಿನನು .ಇದಕ್ಕೆ ಉತ್ತರ ಹೇಳ ಲಿಲ್ಲ. ಸುತ್ತಮುತ್ತಲಿದ್ದವರು ಉಸಿರಾಡದಷ್ಟು ನಿಶ್ಯಬ್ದವಾಗಿದ್ದರು. ಬಂಡಿಯ ಚಕ)ಗಳು ಮಾತ) ಕುಸಿಯುತ್ತಲೇ ಇದ್ದುವು. ಇದ ರಿಂದ ಮೇಡಲಿನನೂ ಸಹ ಅಲ್ಲಿಂದ ಬಿಡಿಸಿಕೊಂಡು ಹೊರಗೆ ಬರುವುದು ಅಸಾಧ್ಯವಾಗಿ ಕಂಡಿತು.

* ಇದ್ದಕ್ಕಿದ್ದ ಹಾಗೆಯೇ ಆ ಗುಂಪು ಆಶ್ಚರ್ಯದಿಂದ ಬೆಚ್ಚಿತು. ಬಂಡಿಯು ಮೆಲ್ಲನೆ ಎದ್ದಿತು; ಚಕ್ರಗಳು, ನಿಂತಿದ್ದ ಗುಣಿಗಳಿಂದ ಅರ್ಧ ಹೊರಗೆ ಬಂದುವು. “ಬೇಗನೆ ಬನ್ನಿ ! ಸಹಾಯ ಮಾಡಿ, ಎಂಬ ಉಸುರುಕಟ್ಟಿದ ಉಬ್ಬಸದ ಧ್ವನಿಯೊಂದು ಕೇಳಿಸಿತು. ಈ ಧ್ವನಿಯು ಯಾರದು ? ತನ್ನ ಕಟ್ಟ ಕಡೆಯ ಪ್ರಯತ್ನ ವನ್ನು ಮಾಡಿದ ಮೇಡಲಿನನದು.

ಜನರೆಲ್ಲರೂ ಸಹಾಯ ಮಾಡಲು ನುಗ್ಗಿದರು. ನಿರ್ಮಲ ಮನಸ್ಸಿನ ಒಬ್ಬನ ಪ್ರಯತ್ನವು ಎಲ್ಲರಿಗೂ ಉತ್ಸಾಹವನ್ನೂ ಶಕ್ತಿಯನ್ನೂ ಕೊಟ್ಟಿತು. ಇಪ್ಪತ್ತು ಕೈಗಳು ಒಟ್ಟುಗೂಡಿ ಬಂಡಿಯು ಎದ್ದಿತು. ಮುದಿ ಫಾಚೆಲ್ ವೆಂಟನು ಸುರಕ್ಷಿತನಾಗಿ ಹೊರಗೆ ಬಂದನು.

ಮೇಡಲಿನನು ಮೇಲಕ್ಕೆ ಎದ್ದನು. ಮೈಯಿಂದ ಬೆವರು ಧಾರೆಯಾಗಿ ಸುರಿಯುತ್ತಿದ್ದಿತು. ಮುಖವು ಕಳಾಹೀನವಾಗಿತ್ತು. ಅವನ ವಸ್ತ್ರಗಳೆಲ್ಲವೂ ಹರಿದು ಕೆಸರಿನಿಂದ ತುಂಬಿದ್ದುವು. ಎಲ್ಲರೂ ಇದನ್ನು ನೋಡಿ ಕಣ್ಣೀರು ಸುರಿಸಿದರು. ಮುದುಕನು ಮೇಡಲಿನನ ಪಾದಗಳಿಗೆ ನಮಸ್ಕರಿಸಿ, ‘ನೀನೇ ದಯಾಮಯ ನಾದ ದೇವರು,’ ಎಂದನು. ಮೇಡಲಿನನಿಗೂ ಸಹ ತಾನು ದೈವಯೋಗ್ಯವಾದ ಕಾರ್ಯಕ್ಕಾಗಿ ಕಷ್ಟ ಪಟ್ಟೆನೆಂಬ ಸಂತೋಷ ದಿಂದ ಕೂಡಿದ ಅನಿರ್ವಚನೀಯವಾದ ಭಾವವು ಮುಖದಲ್ಲಿ ತೇಲು ತಿತ್ತು. ಆತನು ತನ್ನನ್ನೇ ಇನ್ನೂ ಸ್ಥಿರದೃಷ್ಟಿಯಿಂದ ನೋಡು ತಿದ್ದ ಜೇವರ್ಟನ ಮುಖವನ್ನು ಪರಮ ಶಾಂತಭಾವದಿಂದ ನೋಡಿದನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭರವಸೆ
Next post ಕೋಲೇಂಬುದ ಮೇಲೆನ್ನಿರೇ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…